Writing Briefly - 30 tips ( in Kannada )

Original Article – http://paulgraham.com/writing44.html

ಉತ್ತಮ ಲೇಖನಕ್ಕೆ 30 ಸಲಹೆಗಳು

ಉತ್ತಮ ಬರವಣಿಗೆಯ ಮಹತ್ವ ನಾವು ತಿಳಿದುಕೊಂಡಿರುವುದಕ್ಕಿಂತ ಹೆಚ್ಚಿನದ್ದು. ಬರವಣಿಗೆ ಕೇವಲ ವಿಚಾರ ಸಂವಹನಕ್ಕೆ ಸೀಮಿತವಾಗದೇ; ಹೊಸ ವಿಚಾರಧಾರೆಗೆ ಕಾರಣವಾಗುತ್ತದೆ. ನೀವು ಉತ್ತಮ ಬರಹಗಾರರಲ್ಲ ಹಾಗೂ ಅದನ್ನು ಇಷ್ಟಪಡುವುದಿಲ್ಲ ಎಂದರೆ, ಬರವಣಿಗೆಯಿಂದ ಜನಿಸುವ ಹಲವು ವಿಚಾರಧಾರೆಗಳಿಂದ ವಂಚಿತರಾಗಿದ್ದೀರಿ ಎಂದರ್ಥ.

ಉತ್ತಮವಾಗಿ ಬರೆಯುವುದು ಹೇಗೆ ಎನ್ನುವುದಕ್ಕೆ ಒಂದು ಚಿಕ್ಕ ನಿರೂಪಣೆ ಇಲ್ಲಿದೆ.

  1. ಬರವಣಿಗೆಯ ಮೊದಲ ಆವೃತ್ತಿಯನ್ನು, ಅದು ಚೆನ್ನಾಗಿಲ್ಲದಿದ್ದರೂ ಸಾದ್ಯವಾದಷ್ಟು ಬೇಗ ಬರೆಯಿರಿ.

  2. ಅದನ್ನು ಪುನಃ ಪುನಃ ತಿದ್ದಿ; ಅಗತ್ಯವಿಲ್ಲದ ಅಂಶಗಳನ್ನು ತೆಗೆದುಹಾಕಿ.

  3. ನಿಮ್ಮ ಮೊದಲ ಆವೃತ್ತಿ ಸಂಭಾಷಣೆಯಂತಿರಲಿ.

  4. ಕೆಟ್ಟ ಬರವಣಿಗೆಯ ಬಗ್ಗೆ ತೀಕ್ಷ್ಣ ಪ್ರತಿಕ್ರಿಯೆಯನ್ನು ಬೆಳೆಸಿಕೊಳ್ಳಿ; ನಿಮ್ಮ ಬರವಣಿಗೆಯಲ್ಲಿ ಅದನ್ನು ಗುರುತಿಸಿ.

  5. ನಿಮ್ಮ ಮೆಚ್ಚಿನ ಬರಹಗಾರರನ್ನು ಅನುಕರಿಸಿ.

  6. ಲೇಖನವನ್ನು ಆರಂಭಿಸುವುದು ಕಷ್ಟವಾದರೆ, ನಿಮ್ಮ ಸ್ನೇಹಿತರಲ್ಲಿ ಲೇಖನದ ಸಾರಾಂಶವನ್ನು ಹೇಳಿಕೊಳ್ಳಿ; ನೀವು ಹೇಳಿದ್ದನ್ನು ಯಥಾವತ್ ಬರೆದುಕೊಳ್ಳಿ.

  7. ನಿಮ್ಮ ವಿಚಾರದ 80% ನೀವು ಬರೆಯಲು ಪ್ರಾರಂಭಿಸಿದ ನಂತರ ಜೀವತಳೆಯುತ್ತವೆ; ಹಾಗೂ 50% ಭಾಗವು ತಪ್ಪಾಗಿರುತ್ತವೆ ಎಂದೇ ಭಾವಿಸಿ.

  8. ನಿಮ್ಮ ಬರವಣಿಗೆಯನ್ನು ವಿಶ್ವಾಸದಿಂದ ತಿದ್ದಿಕೊಳ್ಳಿ.

  9. ನಿಮ್ಮ ಆಪ್ತ ಸ್ನೇಹಿತರಿಗೆ ಓದಲು ಕೊಡಿ, ಲೇಖನದಲ್ಲಿ ಯಾವ ಭಾಗವು ಗೊಂದಲಮಯವಾಗಿದೆ ಅಥವಾ ಅತಿಯಾಗಿ ವಿವರಿಸಿದ್ದೀರ ಎಂದು ತಿಳಿಯಿರಿ.

  10. ಎಲ್ಲಾ ವಿಚಾರಗಳನ್ನು ಅತಿಯಾಗಿ ವಿವರಿಸಲು ಹೋಗದಿರಿ.

  11. ಬರೆಯುವ ಮೊದಲು ಕೆಲವು ದಿನ ಈ ವಿಚಾರದ ಬಗ್ಗೆ ಚಿಂತಿಸಿ.

  12. ನಿಮ್ಮ ಜೊತೆ ಒಂದು ಸಣ್ಣ ಕಾಗದ ಹಾಗೂ ಲೇಖನಿಯನ್ನು ಯಾವಾಗಲೂ ಇಟ್ಟುಕೊಂಡಿರಿ; ನೀವು ಏನನ್ನೇ ಯೋಚಿಸಿದರೂ ಬರೆದುಕೊಳ್ಳಿ.

  13. ನಿಮ್ಮ ಬರವಣಿಗೆ ಅವಧಿಗೆ ಬದ್ದವಾಗಿದ್ದರೆ, ಮುಖ್ಯವಾದ ವಿಚಾರವನ್ನು ಮೊದಲು ಬರೆಯಿರಿ.

  14. ನಿಮಗಿಷ್ಟವಾದ ವಿಷಯಗಳ ಬಗ್ಗೆ ಬರೆಯಿರಿ.

  15. ಪ್ರಭಾವಶಾಲಿಯಾಗಿ ನಿಮ್ಮನ್ನು ಪ್ರತಿಬಿಂಬಿಸಲು ಪ್ರಯತ್ನಿಸದಿರಿ.

  16. ಲೇಖನದ ಶೀರ್ಷಿಕೆ ಬದಲಿಸಲು ಹಿಂಜರಿಯಬೇಡಿ.

  17. ಅಗತ್ಯವಿದ್ದಲ್ಲಿ ಅಡಿಟಿಪ್ಪಣಿ ನೀಡಿ.

  18. ಪುನರುಕ್ತಿಗಳನ್ನು ಉಪಯೋಗಿಸಿ ವಾಕ್ಯವನ್ನು ಜೋಡಿಸಿ.

  19. ಜೋರಾಗಿ ನಿಮ್ಮ ಲೇಖನವನ್ನು ಓದಿ ಇದರಿಂದ

  •  ಯಾವ ಭಾಗದಲ್ಲಿ ಕ್ಲಿಷ್ಟ  ಶಬ್ದ ಪ್ರಯೋಗವಿದೆ
  •  ಯಾವ  ಭಾಗದಲ್ಲಿ ನೀರಸವಾಗುತ್ತದೆ ( ಓದಲು ಇಷ್ಟಪಡದ ಭಾಗಗಳು ) ಎಂಬುದನ್ನು ಗುರಿತಿಸಿ.
  1. ನಿಮ್ಮ ಲೇಖನದಿಂದ  ಓದುಗರಿಗೆ ಹೊಸ ಹಾಗೂ ಉಪಯುಕ್ತ ಮಾಹಿತಿ ಸಿಗುವಂತಿರಲಿ.

  2. ಬರೆಯಲು ನಿಗದಿತ ಸಮಯ ಕೊಡಿ; ಪುನಃ ಪ್ರಾರಂಭಿಸುವ ಮೊದಲು ಒಮ್ಮೆ ಓದಿ;  ನಿಗದಿತ ಸಮಯಕ್ಕೆ ಮುಗಿಸುವ ಮುನ್ನ ಪುನಃ ಪ್ರಾರಂಭಿಸಲು ಅನುಕೂಲವಾಗುವಂತೆ ನಿಲ್ಲಿಸಿ.

  3. ಅಗತ್ಯವಿದ್ದಲ್ಲಿ ಕೊನೆಯಲ್ಲಿ ಭವಿಷ್ಯದ ಪ್ರಬಂಧಗಳ ವಿಷಯಗಳ ಬಗ್ಗೆ ಟಿಪ್ಪಣಿಗಳನ್ನು ಸಂಗ್ರಹಿಸಿ.

  4. ಪಾಪ್ ಸಂಗೀತವು ವಾಹನದ ರೇಡಿಯೋದಲ್ಲಿ ಕೇಳಲು ಸಮಂಜಸವಾದಂತೆ, ನಿಮ್ಮ ಲೇಖನವು ನಿಮ್ಮಸ್ಟು  ಆಳವಾಗಿ  ಓದಲಾಗದ ಓದುಗರಿಗಾಗಿ ಎಂದು ತಿಳಿಯಿರಿ.

  5. ತಪ್ಪು ಹೇಳಿದ್ದೀರ ಎಂದೆನಿಸಿದರೆ ತತ್-ಕ್ಷಣ ಅದನ್ನು ತಿದ್ದಿಕೊಳ್ಳಿ.

  6. ಯಾವ ವಾಕ್ಯ ಅಸಮಂಜಸವಾಗಿದೆ ಎಂದು ನಿಮ್ಮ ಸ್ನೇಹಿತರಲ್ಲಿ ಕೇಳಿ; ಕಠಿಣ ಪದಗಳನ್ನು ಉಪಯೋಗಿಸಿದ್ದರೆ, ಅದನ್ನು ಸಾಧ್ಯವಾದಷ್ಟು ಮೃದುವಾದ ಮಾತಿನಲ್ಲಿ ಹೇಳಲು ಯತ್ನಿಸಿ.

  7. ಲೇಖನವನ್ನು ಅಂತರ್ಜಾಲದಲ್ಲಿ ಪ್ರಕಟಿಸಿ, ಏಕೆಂದರೆ ಅದು ಹೆಚ್ಚಿನ ಓದುಗರಿಗೆ ದೊರಕುತ್ತದೆ,   ನಿಮ್ಮ ಓದುಗರಿಂದ  ನೀವು ಹೆಚ್ಚು ವಿಚಾರಗಳನ್ನು ಕಲಿಯುತ್ತೀರಿ.

  8. ಲೇಖನದ ಒಂದು ಮುದ್ರಿತ ಪ್ರತಿಯನ್ನು ತೆಗೆದು ಓದಿ.

  9. ಸರಳವಾದ ಪದಗಳನ್ನು ಉಪಯೋಗಿಸಿ.

  10. ಅಪ್ರಸ್ತುತ ಮತ್ತು ಆಶ್ಚರ್ಯದ ನಡುವೆ ಬಹಳ ಅ೦ತರವಿದೆ ಮರೆಯಬೇಡಿ!

  11. ಲೇಖನದ ಅಂತ್ಯವನ್ನು ಗುರುತಿಸಿ;  ಸಂಪೂರ್ಣಗೊಳಿಸಿ.

ಇದು ನನ್ನ ಮೊದಲ ಕನ್ನಡ ತರ್ಜಿಮೆ, ತಪ್ಪಿದ್ದಲ್ಲಿ ಸೂಚಿಸಿ;

ಟಿಪ್ಪಣಿ

ಅಡಿಟಿಪ್ಪಣಿ : [footnote](http://en.wikipedia.org/wiki/Note_(typography) "Footnote")
ಪುನರುಕ್ತಿ : [anaphora](http://en.wikipedia.org/wiki/Anaphoric_pronoun "Anaphora")