Writing Briefly - 30 tips ( in Kannada )
Original Article – http://paulgraham.com/writing44.html
ಉತ್ತಮ ಲೇಖನಕ್ಕೆ 30 ಸಲಹೆಗಳು
ಉತ್ತಮ ಬರವಣಿಗೆಯ ಮಹತ್ವ ನಾವು ತಿಳಿದುಕೊಂಡಿರುವುದಕ್ಕಿಂತ ಹೆಚ್ಚಿನದ್ದು. ಬರವಣಿಗೆ ಕೇವಲ ವಿಚಾರ ಸಂವಹನಕ್ಕೆ ಸೀಮಿತವಾಗದೇ; ಹೊಸ ವಿಚಾರಧಾರೆಗೆ ಕಾರಣವಾಗುತ್ತದೆ. ನೀವು ಉತ್ತಮ ಬರಹಗಾರರಲ್ಲ ಹಾಗೂ ಅದನ್ನು ಇಷ್ಟಪಡುವುದಿಲ್ಲ ಎಂದರೆ, ಬರವಣಿಗೆಯಿಂದ ಜನಿಸುವ ಹಲವು ವಿಚಾರಧಾರೆಗಳಿಂದ ವಂಚಿತರಾಗಿದ್ದೀರಿ ಎಂದರ್ಥ.
ಉತ್ತಮವಾಗಿ ಬರೆಯುವುದು ಹೇಗೆ ಎನ್ನುವುದಕ್ಕೆ ಒಂದು ಚಿಕ್ಕ ನಿರೂಪಣೆ ಇಲ್ಲಿದೆ.
-
ಬರವಣಿಗೆಯ ಮೊದಲ ಆವೃತ್ತಿಯನ್ನು, ಅದು ಚೆನ್ನಾಗಿಲ್ಲದಿದ್ದರೂ ಸಾದ್ಯವಾದಷ್ಟು ಬೇಗ ಬರೆಯಿರಿ.
-
ಅದನ್ನು ಪುನಃ ಪುನಃ ತಿದ್ದಿ; ಅಗತ್ಯವಿಲ್ಲದ ಅಂಶಗಳನ್ನು ತೆಗೆದುಹಾಕಿ.
-
ನಿಮ್ಮ ಮೊದಲ ಆವೃತ್ತಿ ಸಂಭಾಷಣೆಯಂತಿರಲಿ.
-
ಕೆಟ್ಟ ಬರವಣಿಗೆಯ ಬಗ್ಗೆ ತೀಕ್ಷ್ಣ ಪ್ರತಿಕ್ರಿಯೆಯನ್ನು ಬೆಳೆಸಿಕೊಳ್ಳಿ; ನಿಮ್ಮ ಬರವಣಿಗೆಯಲ್ಲಿ ಅದನ್ನು ಗುರುತಿಸಿ.
-
ನಿಮ್ಮ ಮೆಚ್ಚಿನ ಬರಹಗಾರರನ್ನು ಅನುಕರಿಸಿ.
-
ಲೇಖನವನ್ನು ಆರಂಭಿಸುವುದು ಕಷ್ಟವಾದರೆ, ನಿಮ್ಮ ಸ್ನೇಹಿತರಲ್ಲಿ ಲೇಖನದ ಸಾರಾಂಶವನ್ನು ಹೇಳಿಕೊಳ್ಳಿ; ನೀವು ಹೇಳಿದ್ದನ್ನು ಯಥಾವತ್ ಬರೆದುಕೊಳ್ಳಿ.
-
ನಿಮ್ಮ ವಿಚಾರದ 80% ನೀವು ಬರೆಯಲು ಪ್ರಾರಂಭಿಸಿದ ನಂತರ ಜೀವತಳೆಯುತ್ತವೆ; ಹಾಗೂ 50% ಭಾಗವು ತಪ್ಪಾಗಿರುತ್ತವೆ ಎಂದೇ ಭಾವಿಸಿ.
-
ನಿಮ್ಮ ಬರವಣಿಗೆಯನ್ನು ವಿಶ್ವಾಸದಿಂದ ತಿದ್ದಿಕೊಳ್ಳಿ.
-
ನಿಮ್ಮ ಆಪ್ತ ಸ್ನೇಹಿತರಿಗೆ ಓದಲು ಕೊಡಿ, ಲೇಖನದಲ್ಲಿ ಯಾವ ಭಾಗವು ಗೊಂದಲಮಯವಾಗಿದೆ ಅಥವಾ ಅತಿಯಾಗಿ ವಿವರಿಸಿದ್ದೀರ ಎಂದು ತಿಳಿಯಿರಿ.
-
ಎಲ್ಲಾ ವಿಚಾರಗಳನ್ನು ಅತಿಯಾಗಿ ವಿವರಿಸಲು ಹೋಗದಿರಿ.
-
ಬರೆಯುವ ಮೊದಲು ಕೆಲವು ದಿನ ಈ ವಿಚಾರದ ಬಗ್ಗೆ ಚಿಂತಿಸಿ.
-
ನಿಮ್ಮ ಜೊತೆ ಒಂದು ಸಣ್ಣ ಕಾಗದ ಹಾಗೂ ಲೇಖನಿಯನ್ನು ಯಾವಾಗಲೂ ಇಟ್ಟುಕೊಂಡಿರಿ; ನೀವು ಏನನ್ನೇ ಯೋಚಿಸಿದರೂ ಬರೆದುಕೊಳ್ಳಿ.
-
ನಿಮ್ಮ ಬರವಣಿಗೆ ಅವಧಿಗೆ ಬದ್ದವಾಗಿದ್ದರೆ, ಮುಖ್ಯವಾದ ವಿಚಾರವನ್ನು ಮೊದಲು ಬರೆಯಿರಿ.
-
ನಿಮಗಿಷ್ಟವಾದ ವಿಷಯಗಳ ಬಗ್ಗೆ ಬರೆಯಿರಿ.
-
ಪ್ರಭಾವಶಾಲಿಯಾಗಿ ನಿಮ್ಮನ್ನು ಪ್ರತಿಬಿಂಬಿಸಲು ಪ್ರಯತ್ನಿಸದಿರಿ.
-
ಲೇಖನದ ಶೀರ್ಷಿಕೆ ಬದಲಿಸಲು ಹಿಂಜರಿಯಬೇಡಿ.
-
ಅಗತ್ಯವಿದ್ದಲ್ಲಿ ಅಡಿಟಿಪ್ಪಣಿ ನೀಡಿ.
-
ಪುನರುಕ್ತಿಗಳನ್ನು ಉಪಯೋಗಿಸಿ ವಾಕ್ಯವನ್ನು ಜೋಡಿಸಿ.
-
ಜೋರಾಗಿ ನಿಮ್ಮ ಲೇಖನವನ್ನು ಓದಿ ಇದರಿಂದ
- ಯಾವ ಭಾಗದಲ್ಲಿ ಕ್ಲಿಷ್ಟ ಶಬ್ದ ಪ್ರಯೋಗವಿದೆ
- ಯಾವ ಭಾಗದಲ್ಲಿ ನೀರಸವಾಗುತ್ತದೆ ( ಓದಲು ಇಷ್ಟಪಡದ ಭಾಗಗಳು ) ಎಂಬುದನ್ನು ಗುರಿತಿಸಿ.
-
ನಿಮ್ಮ ಲೇಖನದಿಂದ ಓದುಗರಿಗೆ ಹೊಸ ಹಾಗೂ ಉಪಯುಕ್ತ ಮಾಹಿತಿ ಸಿಗುವಂತಿರಲಿ.
-
ಬರೆಯಲು ನಿಗದಿತ ಸಮಯ ಕೊಡಿ; ಪುನಃ ಪ್ರಾರಂಭಿಸುವ ಮೊದಲು ಒಮ್ಮೆ ಓದಿ; ನಿಗದಿತ ಸಮಯಕ್ಕೆ ಮುಗಿಸುವ ಮುನ್ನ ಪುನಃ ಪ್ರಾರಂಭಿಸಲು ಅನುಕೂಲವಾಗುವಂತೆ ನಿಲ್ಲಿಸಿ.
-
ಅಗತ್ಯವಿದ್ದಲ್ಲಿ ಕೊನೆಯಲ್ಲಿ ಭವಿಷ್ಯದ ಪ್ರಬಂಧಗಳ ವಿಷಯಗಳ ಬಗ್ಗೆ ಟಿಪ್ಪಣಿಗಳನ್ನು ಸಂಗ್ರಹಿಸಿ.
-
ಪಾಪ್ ಸಂಗೀತವು ವಾಹನದ ರೇಡಿಯೋದಲ್ಲಿ ಕೇಳಲು ಸಮಂಜಸವಾದಂತೆ, ನಿಮ್ಮ ಲೇಖನವು ನಿಮ್ಮಸ್ಟು ಆಳವಾಗಿ ಓದಲಾಗದ ಓದುಗರಿಗಾಗಿ ಎಂದು ತಿಳಿಯಿರಿ.
-
ತಪ್ಪು ಹೇಳಿದ್ದೀರ ಎಂದೆನಿಸಿದರೆ ತತ್-ಕ್ಷಣ ಅದನ್ನು ತಿದ್ದಿಕೊಳ್ಳಿ.
-
ಯಾವ ವಾಕ್ಯ ಅಸಮಂಜಸವಾಗಿದೆ ಎಂದು ನಿಮ್ಮ ಸ್ನೇಹಿತರಲ್ಲಿ ಕೇಳಿ; ಕಠಿಣ ಪದಗಳನ್ನು ಉಪಯೋಗಿಸಿದ್ದರೆ, ಅದನ್ನು ಸಾಧ್ಯವಾದಷ್ಟು ಮೃದುವಾದ ಮಾತಿನಲ್ಲಿ ಹೇಳಲು ಯತ್ನಿಸಿ.
-
ಲೇಖನವನ್ನು ಅಂತರ್ಜಾಲದಲ್ಲಿ ಪ್ರಕಟಿಸಿ, ಏಕೆಂದರೆ ಅದು ಹೆಚ್ಚಿನ ಓದುಗರಿಗೆ ದೊರಕುತ್ತದೆ, ನಿಮ್ಮ ಓದುಗರಿಂದ ನೀವು ಹೆಚ್ಚು ವಿಚಾರಗಳನ್ನು ಕಲಿಯುತ್ತೀರಿ.
-
ಲೇಖನದ ಒಂದು ಮುದ್ರಿತ ಪ್ರತಿಯನ್ನು ತೆಗೆದು ಓದಿ.
-
ಸರಳವಾದ ಪದಗಳನ್ನು ಉಪಯೋಗಿಸಿ.
-
ಅಪ್ರಸ್ತುತ ಮತ್ತು ಆಶ್ಚರ್ಯದ ನಡುವೆ ಬಹಳ ಅ೦ತರವಿದೆ ಮರೆಯಬೇಡಿ!
-
ಲೇಖನದ ಅಂತ್ಯವನ್ನು ಗುರುತಿಸಿ; ಸಂಪೂರ್ಣಗೊಳಿಸಿ.
ಇದು ನನ್ನ ಮೊದಲ ಕನ್ನಡ ತರ್ಜಿಮೆ, ತಪ್ಪಿದ್ದಲ್ಲಿ ಸೂಚಿಸಿ;